ಸಿದ್ದರಾಮೋತ್ಸವಕ್ಕೆ ಪ್ರತಿಯಾಗಿಯೋ ಏನೋ ಬಿಜೆಪಿ ಸರ್ಕಾರದ ಸಾಧನಾ ಸಮಾವೇಶಕ್ಕೆ ಜನೋತ್ಸವ ಎಂದು ಹೆಸರಿಡಲಾಗಿದೆ. ಈ ಮೂಲಕ ನಮ್ಮಲ್ಲಿ ವ್ಯಕ್ತಿ ಪೂಜೆ ಇಲ್ಲ.. ಏನಿದ್ದರೂ ಜನರ ಪೂಜೆ ಎಂಬ ಸಂದೇಶವನ್ನು ಕೇಸರಿ ಪಡೆ ಕೊಟ್ಟಂತೆ ಕಾಣುತ್ತಿದೆ. ನಾಡಿದ್ದು ದೊಡ್ಡಬಳ್ಳಾಪುರದಲ್ಲಿ ಬೃಹತ್ ಜನೋತ್ಸವ ಸಮಾವೇಶಕ್ಕೆ ಸಕಲ ಸಿದ್ದತೆಗಳು ನಡೆದಿವೆ. ಜುಲೈ 29 ಮತ್ತು 30ರಂದು ಎಲ್ಲಾ ಜಿಲ್ಲೆಗಳಲ್ಲಿ ಜನೋತ್ಸವ ಸಮಾವೇಶ ಆಯೋಜಿಸಲು ಬಿಜೆಪಿ ತೀರ್ಮಾನಿಸಿದೆ. ಜನೋತ್ಸವದ ಕಾರ್ಯಕ್ರಮದ ಲೋಗೋ ಬಿಡುಗಡೆ ಮಾಡಿದೆ. 3 ಮತ್ತು 1 ಸಂಖ್ಯೆಯನ್ನು ಲೋಗೋದಲ್ಲಿ ಬಳಸಿಕೊಂಡಿದೆ. 3 ಅಂದ್ರೆ ಬಿಜೆಪಿ ಸರ್ಕಾರಕ್ಕೆ 3 ವರ್ಷ.. 1 ಅಂದ್ರೆ ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ ಎಂಬ ಅರ್ಥ ಇದ್ಯಂತೆ. ಬಿಜೆಪಿ ಸರ್ಕಾರದ್ದು ಜನೋತ್ಸವ ಅಲ್ಲ.. ಭ್ರಷ್ಟೋತ್ಸವ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
#publictv #bigbulletin #hrranganath